ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಹಿರಿಯಡ್ಕ ಮೇಳದ ವೀರಭದ್ರನ ವೇಷಕ್ಕೆ ರಜತ ಕಿರೀಟ ಸಮರ್ಪಣೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಡಿಸೆ೦ಬರ್ 23 , 2013
ಹಿರಿಯಡಕ ಪೇಟೆಯವರು ಹಾಗೂ ಕ್ಷೇತ್ರಾಭಿಮಾನಿಗಳ ಸಹಕಾರದಿಂದ ನೀಡಲಾದ, ವೀರಭದ್ರನ , ವೀರಭದ್ರನ ವೇಷಕ್ಕೆ ಉಪಯೋಗಿಸುವ ಬೆಳ್ಳಿಯ ಯಕ್ಷಗಾನದ ಕಿರೀಟ ಸಮರ್ಪಣಾ ಸಮಾರ೦ಭವು ಬಾನುವಾರ ಸಂಜೆ ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಹಾಕಿದ ಹಿರಿಯಡ್ಕ ಮೇಳದ ರಂಗ ವೇದಿಕೆಯಲ್ಲಿ ನೆಡೆಯಿತು. ಬೆಳ್ಳಿಯ ಕಿರೀಟವನ್ನು ಹಿರಿಯ ಮದ್ದಳೆ ವಾದಕ, ಜಾನಪದ ತಜ್ನ ಹಿರಿಯಡಕ ಗೋಪಾಲ ರಾವ್ ಮೇಳಕ್ಕೆ ಸಮರ್ಪಿಸಿ ಶುಭ ಹಾರೈಸಿದರು.

ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಶುಭಾಶಂಸನೆ ಗೈದು ಮಾತನಾಡಿ ಕರಾವಳಿಯ ಯಕ್ಷಗಾನ ಕಲೆ ಇತರಕಲೆಗಳಿಗಿಂತ ಬಿನ್ನವಾಗಿದ್ದು ಕೇವಲ ಮನೋರಂಜನೆ ಮಾತ್ರವಲ್ಲದೇ ದೇವರ ಆರಾದನಾ ಕಲೆ ಸಹ ಆಗಿದೆಮೂಲ ನಂಬಿಕೆಗಳನ್ನು ಮೂಡನಂಬಿಕೆ ಎನ್ನುವ ಈ ಕಾಲಘಟ್ಟದಲ್ಲಿ ಕ್ಷೇತ್ರ ಮಹಾತ್ಮೆಯಲ್ಲಿ ಬರುವ ವೀರಭದ್ರನ ವೇಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ಬೆಳ್ಳಿಕಿರೀಟದಿಂದ ಮೇಳ ಮತ್ತು ಕ್ಷೇತ್ರದ ಕೀರ್ತಿ ಇನ್ನಷ್ಟು ವ್ರದ್ದಿಸಲಿ ಎಂದು ಶುಭ ಹಾರೈಸಿದರು.

ಹಿಯಡ್ಕ ಕ್ಷೇತ್ರ ಮಹಾತ್ಮೆ ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಅದ್ಯಕ್ಷತೆ ವಹಿಸಿದ್ದರು, ಡಾ/ ಸುನಿಲ್ ಹೆಗ್ಡೆ. ಉದ್ಯಮಿ ಶ್ರೀ. ಕೆ. ನಟರಾಜ ಹೆಗ್ಡೆ, ಮೇಳದ ವ್ಯವಸ್ಥಾಪಕ ಪಿ. ಕಿಶನ್ ಹೆಗ್ಡೆ, ಇವರು ಆಗಮಿಸಿದ್ದರು. ರಾಘವೇಂದ್ರ ಭಟ್ ಸ್ವಾಗತಿದರು. ಹಿರಿಯಡ್ಕ ಶ್ರೀನಿವಾಸ ರಾವ್ ವಂದಿಸಿದರು. ನವೀನ್ ಕೆ ಶೆಟ್ಟಿಬೆಟ್ಟು ಮತ್ತು ಬಾಲಕ್ರಶ್ಣ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು ಇದಕ್ಕೂ ಮುನ್ನ ಹಿರಿಯಡ್ಕ ಶ್ರೀ ಗಣೇಶ ಕಲಾ ಮಂದಿರದ ಎದುರಿನಿಂದ ರಜತ ಕಿರೀಟವನ್ನು ಬಿರುದು ಬಾವಲಿಗಳೊಂದಿಗೆ ಮೆರವಣಿಗೆಯಲ್ಲಿವೇದಿಕೆಗೆ ತರಲಾಯಿತು. ಬಳಿಕ ಹಿರಿಯಡ್ಕ ಮೇಳದವರಿಂದ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಪ್ರಸಂಗದ ಪ್ರದರ್ಶನ ನೆರವೇರಿತು.

****************

ಸಮಾರ೦ಭದ ಕೆಲವು ಚಿತ್ರಗಳು




















Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ